BREAKING NEWS
Search

ಧಗಿಸುತಿದ್ದ ಚಿತೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಯಲ್ಲಾಪುರದಲ್ಲೊಂದು ವಿಚಿತ್ರ ಘಟನೆ!

2167

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ರೀತಿ ನೋಡಿದರೆ ಯಂತವರೂ ಬೆಚ್ಚಿ ಬೀಳಲೇ ಬೇಕು. ಹೌದು ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತಿದ್ದ
ಯಲ್ಲಾಪುರದ ಕೊಂಕಣ ಕೊಪ್ಪದ ಶಿವರಾಮ ರಾಮಕೃಷ್ಣ ಹೆಗಡೆ (೬೦) ಎಂಬುವವರು ತಮ್ಮ ಬಹು ದಿನದ ರೋಗದಿಂದ ಜಿಗುಪ್ಸೆ ಗೊಂಡುದ್ದರು.ತಾನು ಸಾಯಬೇಕು ಎಂದು ಸತತ ಎರಡು ತಿಂಗಳಿಂದ ಆಹಾರ ಸೇವನೆ ಬಿಟ್ಟಿದ್ದರು.ನಂತರ ಇವರು ಮನೆಯ ಹತ್ತಿರದ ಕಾಡಿನಲ್ಲಿ ಮರದ ಕಟ್ಟಿಗೆಗಳನ್ನು ಒಟ್ಟುಮಾಡಿ ಚಿತೆಯನ್ನು ಉರಿಸಿ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುತು ಪತ್ತೆ ಹಚ್ಚಿದ ಅಂಗಿ.

ಈತನು ಮನೆಯಲ್ಲಿ ಕಾಣದಿದ್ದಾಗ ಹುಡುಕಿದ್ದಾರೆ.ಈತನ ಮನೆಯ ಸ್ವಲ್ಪ ದೂರದಲ್ಲೇ ಕಾಡಿನಲ್ಲಿ ಈತನ ಬಟ್ಟೆಗಳು ಕಾಣಿಸಿದ್ದು ಅಲ್ಲಿಯೇ ಉರಿದು ಆರಿಹೋದ ಚಿತೆಯೂ ಕಂಡಿದ್ದು ಇಲ್ಲಿ ದೇಹದ ಮೂಳೆಗಳು ಸಿಕ್ಕ ಕಾರಣ ಈತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತು ಪತ್ತೆಹಚ್ಚಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ