ಮುಂಡಗೋಡ: ಮಾಜಿ ಶಾಸಕ ಹಾಗೂ ವಾಕರಸಾ ಸಂಸ್ಥೆಯ ಅಧ್ಯಕ್ಷ ವಿ. ಎಸ್. ಪಾಟೀಲ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ಖಚಿತವಾಗಿದೆ ಎಂದು ಇಲ್ಲಿನ ತಹಶೀಲ್ದಾರ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ವಿ.ಎಸ್ ಪಾಟೀಲರ ಪುತ್ರನಿಗೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ಪುತ್ರನಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ವಿ.ಎಸ್ ಪಾಟೀಲರು ಗಂಟಲಿನ ದ್ರವದ ಮಾದರಿ ತಗೆದು ಕಾರವಾರಕ್ಕೆ ಕಳುಹಿಸಲಾಗಿತ್ತು. ಈ ಪರೀಕ್ಷೆ ವರದಿ ಮಂಗಳವಾರ ಬಂದಿದ್ದು ಕೋವಿಡ್ ಸೋಂಕು ಇರುವುದು ಖಚಿತವಾಗಿದೆ.
ಪಟ್ಟಣದಲ್ಲಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ರವರ ಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದರು ಸಂಜೆ ವೇಳೆ ಪಾಟೀಲರಿಗೆ ಕೊರೊನಾ ಸೋಂಕು ಇರುವ ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಆತಂಕ ಮನೆ ಮಾಡಿದೆ.
ಇಲ್ಲಿನ ತಹಶೀಲ್ದಾರ ಶ್ರೀಧರ ಮುಂದಲಮನಿ ಈ ಕುರಿತು ಮಾತನಾಡಿ, ಮಾಜಿ ಶಾಸಕರಾದ ವಿ.ಎಸ್ ಪಾಟೀಲ್ ರವರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಸ್ವಯಂ ಪ್ರೇರಿತರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.

ಇತರೆಪ್ರಮುಖ ಸುದ್ದಿಮುಖಪುಟ
ಯಲ್ಲಾಪುರ ಮಾಜಿ ಶಾಸಕ ವಿ.ಎಸ್.ಪಾಟೀಲ್ ಗೆ ಕರೋನಾ ಪಾಸಿಟಿವ್!
By adminಆಗಸ್ಟ್ 19, 2020, 14:11 ಅಪರಾಹ್ನ0
Previous Postಉತ್ತರ ಕನ್ನಡ ಜಿಲ್ಲೆಯಲ್ಲಿ 131 ಜನರಿಗೆ ಕರೋನಾ ಪಾಸಿಟಿವ್ !
Next Postಫೋಟೋಗ್ರಾಫಿ ಎಂಬ ಬೆಳಕಿನ ಬರವಣಿಗೆಗೊಂದು ದಿನ..