BREAKING NEWS
Search

ಶಿಥಿಲ ಗೊಂಡ ಬೆಡ್ತಿ ಸೇತುವೆ ಮೇಲೆ ಶಿವರಾಮ್ ಹೆಬ್ಬಾರ್ ಮಾಡಿದ್ದೇನು ಗೊತ್ತಾ!

1368

ಕಾರವಾರ:- ಪ್ರವಾಹದಿಂದ ಬೀಳುವ ಹಂತದಲ್ಲಿದ್ದ ಸೇತುವೆ ಯಲ್ಲಿ ಸಂಚರಿಸಲು ಹೆದರಿದ NWKSRTC ಬಸ್ ಚಾಲಕನಿಗೆ ಯಲ್ಲಾಪುರ ನಿಕಟಪೂರ್ವ ಶಾಸಕ ಶಿವರಾಮ್ ಹೆಬ್ಬಾರ್ ದೈರ್ಯ ತುಂಬಿ ಸ್ವತಹಾ ಬಸ್ ನಲ್ಲಿ ಕುಳಿತು ಮುರಿಯುವ ಹಂತದಲ್ಲಿದ್ದ ಸೇತುವೆಯನ್ನು ದಾಟಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಪ್ರಯಾಣಿಕರಿಗೆ ನೆರವಾದರು.

ಹೆಬ್ಬಾರ್ ಕದರ್ ವೀಡಿಯೋ ನೋಡಿ:-

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಿರಸಿ ಮಾರ್ಗದ ಬೇಡ್ತಿ ನದಿ ಸೇತುವೆ ಬಳಿ ಪ್ರವಾಹ ದಿಂದ ಸೇತುವೆಯ ಕೆಲವು ಭಾಗಗಳು ತೊಂದರೆಯಾಗಿ ಮೂರು ದಿನದಿಂದ ಯಲ್ಲಾಪುರ-ಶಿರಸಿ ಸಂಚಾರ ಬಂದ್ ಆಗಿತ್ತು.

ಇದಲ್ಲದೇ ಲೋಕೋಪಯೋಗಿ ಇಲಾಖೆ ಸಂಚಾರಕ್ಕೆ ಯೋಗ್ಯವಲ್ಲದ ಸೇತುವೆ ಎಂದು ದೃಡೀಕರಿಸಿ ಸಂಚಾರ ಬಂದ್ ಮಾಡಿತ್ತು.

ಇದರಿಂದಾಗಿ ಶಿರಸಿ ಭಾಗಕ್ಕೆ ಸಂಚರಿಸುವ ಪ್ರಯಾಣಿಕರು ಶಿರಸಿಗೆ ತೆರಳಲಾರದೇ ಮೂರು ದಿನದಿಂದ ತೊಂದರೆ ಅನುಭವಿಸಿದ್ದರು.

ಇದನ್ನು ಮನಗಂಡ ಶಾಸಕ ಶಿವರಾಮ್ ಹೆಬ್ಬಾರ್ ಸೇತುವೆ ಮೇಲೆ ಸಂಚರಿಸಲು ಹೆದರಿದ್ದ ಬಸ್ ಚಾಲಕನಿಗೆ ದೈರ್ಯ ತುಂಬಿ ಸ್ವತಹಾ ಬಸ್ ಚಾಲಕನ ಬಳಿ ಕುಳಿತು ಬಸ್ ಚಲಾಯಿಸುವಂತೆ ದೈರ್ಯ ತುಂಬಿದ್ದಾರೆ.

ಬಸ್ ನಲ್ಲಿ ಕುಳಿತು ಜೈ ಮಾರಿಕಾಂಬೆ ಎಂದು ದೇವರನ್ನು ನೆನೆದು ಸೇತುವೆ ದಾಟಿಸಿದರು.ನಂತರ ಪ್ರಯಾಣಿಕರು ಬಸ್ ಹತ್ತಿ ಶಿರಸಿಗೆ ಪ್ರಯಾಣ ಬೆಳಸಿದ್ದಾರೆ.

ಇನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದು ಭಾರಿ ವಾಹನಕ್ಕೆ ಸದ್ಯ ಈ ಸೇತುವೆಯಲ್ಲಿ ನಿಷೇಧಿಸಲಾಗಿದೆ.




Leave a Reply

Your email address will not be published. Required fields are marked *