BREAKING NEWS
Search

ಯಲ್ಲಾಪುರ:ಅಪ್ರಾಪ್ತೆ ಅತ್ಯಾಚಾರ ಮಾಡಿದವನಿಗೆ 14 ವರ್ಷ ಜೈಲು ಶಿಕ್ಷೆ!

349

ಕಾರವಾರ: ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಸಾಕ್ರು ಟಕ್ಕು ಹುಂಬೆ ಈತನನ್ನು ಕಾರವಾರದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಅತ್ಯಾಚಾರ ಪ್ರಕರಣದ ಅಡಿ ದೋಷಿ ಅಂತಾ ಸಾಬೀತಾದ ಹಿನ್ನೆಲೆಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 60,000 ದಂಡ ವಿಧಿಸಿ ಇಂದು ತೀರ್ಪು ನೀಡಿದೆ.

ಯಲ್ಲಾಪುರ ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಹೊಸಳ್ಳಿ ಗ್ರಾಮದಲ್ಲಿ ಆರೋಪಿತನು 17 ವರ್ಷ ಪ್ರಾಯದ ಬಾಲಕಿಯನ್ನು ಮನೆಗೆ ಕರೆಯಿಸಿಕೊಂಡು ಬಲಾತ್ಕಾರ ವಾಗಿ ದೈಹಿಕ ಸಂಭೋಗ ಮಾಡಿ ಗರ್ಭಿಣಿಯಾಗಲು ಕಾರಣವಾದ ಅಪರಾಧದ ಮೇಲೆ ಯಲ್ಲಾಪುರ ಪಿ.ಎಸ್.ಐ.ಗಳಾದ ವಿಜಯ ಬಿರಾದಾರ ಹಾಗೂ ಶ್ರೀಧರ ಎಸ್.ಆರ್. ತನಿಖೆ ನಡೆಸಿ ಐ.ಪಿ.ಸಿ. ಕಲಂ 376 (2) (ಎನ್), ಮತ್ತು ಕಲಂ-5(ಐ) ಮತ್ತು 6 ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ್ದರು.

ಸಾಂದರ್ಭಿಕ ಚಿತ್ರ- photo- Google

ಸುಧೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ 376 (2) (ಎನ್) ರ ಅಡಿಯಲ್ಲಿ 7 ವರ್ಷ ಜೈಲುಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿದ್ದು, ತಪ್ಪಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅದರಂತೆ ಪೋಕ್ಸೋ ಕಾಯಿದೆ ಕಲಂ: ಕಲಂ-5(ಐ) ಮತ್ತು 6 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ ರೂ. 30,000 ದಂಡ ವಿಧಿಸಿದ್ದು, ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷಿ ವಿಧಿಸಿದ್ದು, ಪ್ರಕಟವಾದ ಎರಡೂ ಶಿಕ್ಷೆಗಳು ಒಟ್ಟಾತ್ರಯಲ್ಲಿ ಜಾರಿಗೆ ಬರುವಂತೆ ಆದೇಶಿಸಿದ್ದಲ್ಲದೇ, ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ ರೂ. 50,000 ವನ್ನು ಪರಿಹಾರ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸುಭಾಶ ಪಿ. ಕೈರನ್ನ ವಾದ ಮಂಡಿಸಿದ್ದರು.

ಕಾರವಾರ ವಕೀಲರ ಸಂಘದಿಂದ ರಾಮ್​​ ಜೇಠ್ಮಲಾನಿ ನಿಧನಕ್ಕೆ ಸಂತಾಪ

ಕಾರವಾರ:- ಕೇಂದ್ರದ ಮಾಜಿ ಸಚಿವ, ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ರಾಮ್​​ ಜೇಠ್ಮಲಾನಿ (95) ದೆಹಲಿಯ ನಿವಾಸದಲ್ಲಿ ಭಾನುವಾರ ಬೆಳಗ್ಗೆ ನಿಧನರಾದ ಹಿನ್ನೆಲೆಯಲ್ಲಿ ಕಾರವಾರದ ವಕೀಲರಸಂಘ ದಿಂದ ಒಂದು ನಿಮಿಷದ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಧಿಶರಾದ ಶಾಂತವೀರ ಶಿವಪ್ಪ ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾದ ಚಂದ್ರಶೇಖರ ಎಚ್ ನಾಯ್ಕ್ ,ಜಿಲ್ಲಾ ಸರಕಾರಿ ಅಭಿಯೊಜಕರು ಹಾಗೂ ಸಂಘದ ಎಲ್ಲಾ ವಕೀಲರು ಹಾಜರಿದ್ದರು.
Leave a Reply

Your email address will not be published. Required fields are marked *