ಯಲ್ಲಾಪುರ:- ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ನಿನ್ನೆ ರಾತ್ರಿ (ದಿ.9-02-2021) ಬಂಧಿಸಿದ್ದಾರೆ.
ಬಂಧಿತರು ಕಲಘಟಗಿಯ ಮೌಲಾಲಿ ತಂದೆ ಮಹ್ಮದ ಸಾಬ್ (37),ಶಿವಮೊಗ್ಗ ಜಿಲ್ಲೆ ಸಾಗರದ ಮಹ್ಮದ ಆಸೀಪ್ ಮಹ್ಮದ ಇಲಿಯಾಸ್ (37) ಮತ್ತು ಅತಾವುಲ್ಲಾ ಇಸ್ಮಾಯಿಲ್ಸಾಬ್ ಮಕಾಂದರ (36) ಎಂಬುವವರಾಗಿದ್ದಾರೆ.
ಫೆ.9 ರ ರಾತ್ರಿ ಹಾವೇರಿ ಮೂಲದ ಕೃಷ್ಣಾಜಿ ಎಂಬ ಬೈಕ್ ಸವಾರನನ್ನು ಮಲ್ಲಿಕ್ ಹೋಟೇಲ್ ಬಳಿ ಅಡ್ಡಗಟ್ಟಿ ,ಹಲ್ಲೆ ನಡೆಸಿ ಪಿಸ್ತೂಲ್ ತೋರಿಸಿ ಹಣ, ಆಭರಣ ದೋಚಿದ್ದರು.
ಕೃಷ್ಣಾಜಿ ಯವರು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು ದರೋಡೆ ಮಾಡಿದ ಮೂರುಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.